“ಯೋಗ ಬದುಕಿನ ಅಭಿನವ ಸಂಬಂಧ .ಯೋಗ ಎಂದರೆ ಒಟ್ಟು ಸೇರುವುದು. ಶಿಸ್ತಿನ ಜೀವನಕ್ಕೆ ಉತ್ತಮ ಆರೋಗ್ಯಕ್ಕೆ ಹಾಗೂ ಏಕಾಗ್ರತೆಗೆ ಯೋಗ ಅಗತ್ಯ . ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಸಮತೋಲನದಲ್ಲಿ ಇದ್ದಾಗ ದೇವರ ಸಾನಿಧ್ಯವನ್ನು ಅನುಭವಿಸಲು ಸಾಧ್ಯ . “ಎಂದು ಪ್ರೊಫೆಸರ್ ರಾಜಮಣಿ ರಾಮಕುಂಜ ಇವರು ಕಾರ್ಮೆಲ್ ಪ್ರೌಢಶಾಲೆ ಮೊಡಂಕಾಪು ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಮಾಡುವ ವಿಧಾನಗಳನ್ನು ಪ್ರದರ್ಶಿಸಿದರು. ಮುಖ್ಯ ಶಿಕ್ಷಕಿ ಭಗಿನಿ ವೀರಾ ಪ್ರತಿಜ್ಞೆಯನ್ನು ಬೋಧಿಸಿದರು.ದೈಹಿಕ ಶಿಕ್ಷಕರಾದ ಶ್ರೀ ಸುರೇಶ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಡೆನಿಲ್ಲಾ ರೊಡ್ರಿಗಸ್ ಸ್ವಾಗತಿಸಿದರು, ಸೌಮ್ಯ ಧನ್ಯವಾದವಿತ್ತರು. ರೋಶನ್ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಸುವುದು ಅತ್ಯಂತ ಅಗತ್ಯ. ಅವರು ಭವಿಷ್ಯದ ನಿರ್ಮಾತೃಗಳು ಆದ್ದರಿಂದ ಪರಿಸರದ ಮೇಲಿನ ಪ್ರೇಮ ಮತ್ತು ಜವಾಬ್ದಾರಿಯು ಅವರನ್ನು ಉತ್ತಮ ನಾಗರಿಕರಾಗಿ ರೂಪಿಸುತ್ತದೆ.ಈಗಿನಿಂದಲೇ ಪರಿಸರ ಸಂರಕ್ಷಣೆಯ ಅಭ್ಯಾಸ ಬೆಳೆದರೆ, ಮುಂದಿನ ಪೀಳಿಗೆಗೆ ಶುದ್ಧ ಜಲ, ಶುದ್ಧ ವಾಯು, ಹಸಿರುಗಾವಲು ಉಳಿಸುವಲ್ಲಿ ಸಹಾಯವಾಗುತ್ತದೆ.ಪರಿಸರವನ್ನು ಅರಿಯುವುದು ಪುಸ್ತಕದ ಪಾಠಕ್ಕೆ ಮೀರಿ ಬದುಕಿನ ಪಾಠವಾಗುತ್ತದೆ. ತಾವು ಬದುಕುವ ಜಗತ್ತನ್ನು ಅವರು ನಿರೀಕ್ಷೆಗಿಂತ ಹೆಚ್ಚು ಪರಿಚಯಿಸಿಕೊಳ್ಳುತ್ತಾರೆ.ಪರಿಸರವನ್ನು ಸಂರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ ಎಂದು ಕಾರ್ಮೆಲ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಭಗಿನಿ ಮರಿಯಪ್ರಿಯ ಅಭಿಪ್ರಾಯ ಪಟ್ಟರು . ಹಸಿರು ಭವಿಷ್ಯ ಪರಿಸರ ಸಂಘದ ವತಿಯಿಂದ ಆಯೋಜಿಸಲಾದ ನನ್ನ ಉಸಿರಿಗೆ ನನ್ನ ಹಸಿರು ವೃಕ್ಷಾಂದೋಲನ ಕಾರ್ಯಕ್ರಮವನ್ನು ,ಸಸಿಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಭಗಿನಿ ವೀರ ವಹಿಸಿದ್ದರು .ಮಾರ್ಗದರ್ಶಿ ಶಿಕ್ಷಕರಾದ ಶ್ರೀ ರೋಷನ್ ಪಿಂಟೊ ,ಪರಿಸರ ಸಂಘದ ನಾಯಕಿ ಮುಝಯಿನ, ಕಾರ್ಯದರ್ಶಿ ಪ್ರಿಯಾಂಕ ಉಪಸ್ಥಿತರಿದ್ದರು . ಬಂಟ್ವಾಳ ವಲಯ ಅರಣ್ಯ ಇಲಾಖೆಯ ಸಹಯೋಗದಿಂದ ಸಸಿಗಳನ್ನು ನೆಟ್ಟು ಪೋಷಿಸುವ ಹೊಣೆಹೊತ್ತ 150 ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು..ಶಾಲಾ ಪರಿಸರ ಸಂಘವು ಇಂತಹ ಅನೇಕ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡು ಉತ್ತಮ ಭವಿಷ್ಯಕ್ಕಾಗಿ ಜಾಗೃತರಾಗಲು ಪರಿಸರ ಪ್ರೇಮ ಬೆಳೆಸುವಲ್ಲಿ ಸಹಾಯ ಮಾಡುತ್ತದೆ. ಅಧಿತಿ ರಾವ್ ಸ್ವಾಗತಿಸಿದಳು, ನಿಹಾರಿಕಾ ಧನ್ಯವಾದ ನೀಡಿದರು. ರಝಾನ ಕಾರ್ಯಕ್ರಮವನ್ನು ನಿರೂಪಿಸಿದಳು.
ಎಲ್ಲ ಮನೆಗಳ ನೀರು,ಅನ್ನ ,ಪ್ರಾರ್ಥನೆ ಒಂದೇ ಎಂದು ತಿಳಿಸುವುದು ಶಾಲೆ ಮಾತ್ರ.ಶಾಲಾ ಕೊಠಡಿಗಳು ಮಾನವ ಕುಲದ ಅಭಿವೃದ್ಧಿಯ ಮೂಲಗಳಾಗಿವೆ .ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳ ಜೊತೆ ನಡೆಯುವುದು ಹೆತ್ತವರ ಜವಾಬ್ದಾರಿ.ಮನೆಗಳಲ್ಲಿ ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸುವುದರಿಂದ ಸಮಾಜವನ್ನು ಸುಸಂಸ್ಕೃತಗೊಳಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಗುರುತಿಸಿ ಅದನ್ನು ಪೋಷಿಸುವುದು ಹೆತ್ತವರ ಹಾಗೂ ಶಿಕ್ಷಕರ ಜವಾಬ್ದಾರಿ.ಮನೆಗಳಲ್ಲಿ ಹೆತ್ತವರು ಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಲು ಪೂರಕ ವಾತಾವರಣ ಕಲ್ಪಿಸಬೇಕು.ಮಕ್ಕಳ ಉತ್ತಮ ಬೆಳವಣಿಗೆಗೆ ಕೌಟುಂಬಿಕ ಸ್ವಾಸ್ಥ್ಯ ಅಗತ್ಯ .ಪೋಷಕರು ಶಾಲೆ, ಶಿಕ್ಷಕರು, ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.ಸಮಸ್ಯೆಗಳು ಬಂದಾಗ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹಾರ ಕಂಡುಕೊಳ್ಳಬೇಕು . ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ .ಕುರಿಯನ್ ಅಧಿಕಾರತ್ತಿಲ್ ಕಾರ್ಮೆಲ್ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇದರ ಬೆಳ್ಳಿ ಹಬ್ಬದ ಲಾಂಛನವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಸೌರವ್ಯೂಹದಲ್ಲಿ ಜೀವಿಗಳನ್ನು ಒಳಗೊಂಡ ಏಕೈಕ ಗ್ರಹ ಎಂದರೆ ಭೂಮಿ . ಸೂರ್ಯನು ಭೂಮಿಯ ಮೇಲಿನ ಎಲ್ಲ ಜೀವಿಗಳಿಗೆ ಜೀವನ ಆಧಾರ . ಸೂರ್ಯನು ಸಹ ಇತರ ಜೀವಿಗಳಂತೆ ಬಾಲ್ಯ,ಯೌವ್ವನ ,ವೃದ್ಯಾಪ್ಯ ಹಂತಗಳನ್ನು ದಾಟುತ್ತಾನೆ . ಎಂದು ಅಮೆಚ್ಯೂರ್ ಆಸ್ಟ್ರೋನಮಿ ಕ್ಲಬ್ ,ಬೆಂಗಳೂರು ಇಲ್ಲಿನ ಶ್ರೀಮತಿ ಪದ್ಮಶ್ರೀ ಅವರು ಹೇಳಿದರು.
ಕಾರ್ಮೆಲ್ ಪ್ರೌಢಶಾಲೆ , ಮೊಡಂಕಾಪುನಲ್ಲಿ ವಿಜ್ಞಾನ ಸಂಘದ ಸಹಯೋಗದಿಂದ ಆಯೋಜಿಸಿದ.ಸೌರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .
ಸೂರ್ಯನ ಉಗಮ,ರಚನೆ,ಸೌರ ಕಲೆಗಳು,ಸೌರ ಜ್ವಾಲೆ ಮುಂತಾದ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು . ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ರಘು ಎಂ ಬಿ . ಯವರು ಸೀ ಸ್ಟಾರ್ ಸ್ಮಾರ್ಟ್ ಟೆಲಿಸ್ಕೋಪ್ ಸಹಾಯದಿಂದ ನೈಜವಾದ ಸೂರ್ಯನನ್ನು ಹಾಗೂ ಸೂರ್ಯನ ಮೇಲಿನ ಸೌರ ಕಲೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅದರ ಬಗ್ಗೆ ಮಾಹಿತಿ ನೀಡಿದರು .ಮುಖ್ಯ ಶಿಕ್ಷಕಿ ಭ . ನವೀನ ಉಪಸ್ಥಿತರಿದ್ದರು
ಶ್ರೀಮತಿ ಉಮಾ ದೇವಿ ಸ್ವಾಗತಿಸಿದರು ,ಶ್ರೀಮತಿ ಸೌಮ್ಯ ಧನ್ಯವಾದವಿತರು ,ಕಾರ್ಯಕ್ರಮವನ್ನು ಶ್ರೀ ರೋಶನ್ ಪಿಂಟೊ ನಿರೂಪಿಸಿದರು
ಶಿಕ್ಷಣ ಜಗತ್ತನ್ನು ಬದಲಾಯಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಕಾರ್ಮೆಲ್ ಪ್ರೌಢಶಾಲೆಯಲ್ಲಿ ದಿನಾಂಕ 2-06-2025 ರಂದು ಶಾಲಾ ಪ್ರಾರಂಭೋತ್ಸವ ಜರುಗಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶಿಕ್ಷಕಿ ಉಮಾದೇವಿ ಎನ್ ಸರ್ವರನ್ನು ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಭಗಿನಿ ಮರಿಯಾ ಪ್ರಿಯಾ ಎ ಸಿ ದೀಪೋಜ್ವಲನಗೊಳಿಸಿದರು. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎಂ ಶರಣ್ಯ ವಿ ಹೊಳ್ಳ , ದ್ವಿತೀಯ ಸ್ಥಾನ ಗಳಿಸಿದ ಪ್ರಣಮ್ಯ ಇವರನ್ನು ವೇದಿಕೆಯಲ್ಲಿರುವ ಗಣ್ಯರು ಸನ್ಮಾನಿಸಿದರು. ಆನಂತರ ಶಿಕ್ಷಕರು ತಮ್ಮ ಸ್ವಪರಿಚಯ ಮಾಡಿದರು . ಹೊಸದಾಗಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದ ಭಗಿನಿ ವೀರ ಎ ಸಿ ಹಿತನುಡಿಗಳನ್ನಾಡಿದರು. ಅನಂತರ ಎಂಟನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜೀವನ್ ಲೋಬೋ ರವರು ಉಚಿತ ಬರೆಯುವ ಪುಸ್ತಕವನ್ನು ವಿತರಿಸಿದರು. ಶಿಕ್ಷಕಿ ಡೆನಿಲ್ಲರವರು ಧನ್ಯವಾದವನ್ನು ಅರ್ಪಿಸಿದರು . ಉಪಮುಖ್ಯೋ ಪಾಧ್ಯಾಯರಾದ ಶ್ರೀ ರೋಷನ್ ಪಿಂಟೋ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯವಾಯಿತು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿ ಊಟದ ಜೊತೆಗೆ ಸಿಹಿ ಹಂಚಲಾಯಿತು.
ಅನ್ವೇಷಣೆ ,ಸಂಶೋಧನೆಯಿಂದ ದೇಶದ ಬೆಳವಣಿಗೆ ಸಾಧ್ಯ.ಮಾನವ ಕುಲದ ಪ್ರಗತಿಗೆ ವಿಜ್ಞಾನ ಅಗತ್ಯ. ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸಜನಶೀಲತೆಯಿಂದ ವಿಜ್ಞಾನಿಯಾಗಲು ಸಾಧ್ಯ.ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಸುತ್ತಲಿನ ಪ್ರಪಂಚವನ್ನು ಆಳವಾಗಿ ಅರ್ಥೈಸುತ್ತೇವೆ .ಎಂದು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ವಂದನೀಯ ಸ್ವಾಮಿ ಮೆಲ್ವಿನ್ ಲೋಬೊರವರು ಅಭಿಪ್ರಾಯ ಪಟ್ಟರು .ಶಾಲಾ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ , ಕಾರ್ಮೆಲ್ ಪ್ರೌಢಶಾಲೆ ,ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಬಂಟ್ವಾಳ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಯನ್ನು ಉದ್ಘಾಟಿಸಿ ಮಾತನಾಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಭ . ರೋಸಿಲ್ಡ್ ವಹಿಸಿದ್ದರು
ಶಿಕ್ಷಣ ಸಂಯೋಜಕಿ ಶ್ರೀಮತಿ ಪ್ರತಿಮ ಪ್ರಸ್ತಾವನೆಯನ್ನು ನೀಡಿದರು .ವೇದಿಕೆಯಲ್ಲಿ ಕಾರ್ಮೆಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜೀವನ್ ಲೋಬೊ ,ಶ್ರೀಮತಿ ಸಂಶಾದ್
ಕಾರ್ಯಕಾರಿ ಸಮಿತಿಯ ಸದಸ್ಯರು ,ತೀರ್ಪುಗಾರರಾದ ಶ್ರೀ ನಿರಂಜನ್ ಜೈನ್ , ಶ್ರೀ ಶ್ರೀಕಾಂತ್,ಶ್ರೀ ಲಕ್ಷ್ಮಣ್ ,ಶ್ರೀ ಪ್ರವೀಣ್ ಕುಮಾರ್ ,ಶ್ರೀ ಸುರೇಶ್,ಶ್ರೀಮತಿ ಪೂರ್ಣಿಮಾ ಉಪಸ್ಥಿತರಿದ್ದರು .ಭ.ವೀರಾ ಸ್ವಾಗತಿಸಿದ್ದರು ,ಶ್ರೀ ರೋಷನ್ ಪಿಂಟೊ ಧನ್ಯವಾದವಿತ್ತರು ,ಶ್ರೀಮತಿ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು .
ಫಲಿತಾಂಶ - ವೈಯಕ್ತಿಕ ವಿಭಾಗ
ಪ್ರಥಮ -ಸರಕಾರಿ ಪ್ರೌಢಶಾಲೆ , ಕಡೇ ಶಿವಾಲಯ
ದ್ವಿತೀಯ-ಸರಕಾರಿ ಪ್ರೌಢಶಾಲೆ , ಕೊಯಿಲ
ತೃತಿಯ -ಕಾರ್ಮೆಲ್ ಪ್ರೌಢಶಾಲೆ ಮೊಡಂಕಾಪು
ಗುಂಪು ವಿಭಾಗ
ಪ್ರಥಮ-ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ,ಬಂಟ್ವಾಳ
ದ್ವಿತೀಯ -ಶ್ರೀ ಸತ್ಯ ಸಾಯಿ ಪ್ರೌಢಶಾಲೆ , ಅಳಿಕೆ
ತೃತೀಯ -ಎಸ್ ವಿ ಎಸ್ ದೇವಳ ಕನ್ನಡ ಮಾಧ್ಯಮ ಶಾಲೆ ,ಬಂಟ್ವಾಳ